Breaking :School Holiday: Former Prime Minister Manmohan Singh passes away at 92-ನಾಳೆ ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!

School Holiday: Former Prime Minister Manmohan Singh passes away at 92

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Former Prime Minister Manmohan Singh) ಕೊನೆಯುಸಿರೆಳೆದಿದ್ದಾರೆ. 92ನೇ ವಯಸ್ಸಿನಲ್ಲಿ ಮನಮೋಹನ್‌ ಸಿಂಗ್‌ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ದೆಹಲಿ ಏಮ್ಸ್‌ (Delhi Aims) ಆಸ್ಪತ್ರೆಗೆ ಇಂದು ರಾತ್ರಿ ಮನಮೋಹನ್‌ ಸಿಂಗ್‌ ಅವರನ್ನು ದಾಖಲಿಸಲಾಗಿತ್ತು.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮನಮೋಹನ್‌ ಸಿಂಗ್‌ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ಸೇರಿಸುವಾಗಲೇ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ನಾಳೆ ಕರ್ನಾಟಕ ರಾಜ್ಯಾದ್ಯಂತೆ ಸರ್ಕಾರಿ ರಜೆ (Government Holiday) ಘೋಷಣೆ ಮಾಡಲಾಗಿದೆ. ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ (School-College Holiday ಇರಲಿದೆ.

ನಾಳೆ ಶಾಲಾ-ಕಾಲೇಜುಗಳಿಗೆ ರಜೆ!

ಮನಮೋಹನ ಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಜೊತೆಗೆ ನಾಳೆ ದಿನಾಂಕ 27.12.2024ರಂದು ಸರ್ಕಾರಿ ರಜೆ ಘೋಷಿಸಲಾಗಿದೆ. ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ಈಗಾಗಲೇ ಒಂದು ವಾರ ಗಳ ಕಾಲ ರದ್ದು ಮಾಡೋದಾಗಿ ಡಿಸಿಎಂ ಡಿಕೆ ಶಿವಕುಮಾರ್‌ ಅವರು ತಿಳಿಸಿದ್ದಾರೆ

ಮನಮೋಹನ್ ಸಿಂಗ್ ರವರು ತಮ್ಮ ಶಾಂತ ಸ್ವಭಾವ, ಆಳವಾದ ಜ್ಞಾನ ಮತ್ತು ಅಪ್ರತಿಮ ದೃಷ್ಟಿಕೋನದಿಂದ ದೇಶದ ಆರ್ಥಿಕತೆ ಹಾಗೂ ಆಡಳಿತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದಿದ್ದರು. ಇದೀಗ ಮನಮೋಹನ್‌ ಸಿಂಗ್ ಅವರು ಇಹಲೋಕ ತ್ಯಜಿಸಿದ್ದಾರೆ. ಇದೇ ಕಾರಣಕ್ಕೆ ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.

Dr Manmohan Singh: ಆರ್ಥಿಕ ಸಲಹೆಗಾರನಿಂದ ಭಾರತದ ಪ್ರಧಾನಿ ಹುದ್ದೆವರೆಗೆ! ಮನಮೋಹನ್ ಸಿಂಗ್ ಹೆಜ್ಜೆ ಗುರುತು ಇಲ್ಲಿದೆ

ದೆಹಲಿ: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಡಾ. ಮನಮೋಹನ್ ಸಿಂಗ್ (Former Prime Minister Manmohan Singh) (92) ಅವರು ಇಂದು ನಿಧನರಾಗಿದ್ದಾರೆ. 2004 ರಿಂದ 2014 ರವರೆಗೆ ಪ್ರಧಾನಿಯಾಗಿದ್ದ (Prime Minister) ಅವರು, ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಆದರೆ ಕೆಲ ದಿನಗಳಿಂದ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಇದೀಗ ಅವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಇಂದು ರಾತ್ರಿ 8 ಗಂಟೆ ಸುಮಾರಿಗೆ ಉಸಿರಾಟದಲ್ಲಿ ಏರುಪೇರಾಗಿ ದೆಹಲಿ ಏಮ್ಸ್ (AIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ರಾತ್ರಿ 10.20ರ ಸುಮಾರಿಗೆ ಅವರು ನಿಧನರಾದರೆಂದು ಮಾಹಿತಿ ತಿಳಿದು ಬಂದಿದೆ.

ಮಾಜಿ ಪ್ರಧಾನಿ DR.ಮನಮೋಹನ್ ಅವರ ಬಾಲ್ಯ

ಭಾರತದ 14 ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್(Former Prime Minister Manmohan Singh)ಅವರನ್ನು ಚಿಂತಕರು ಮತ್ತು ವಿದ್ವಾಂಸರಾಗಿದ್ದರು. ಮನಮೋಹನಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದರು. ಡಾ. ಸಿಂಗ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರು. ಬಳಿಕ ಅವರು ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಮುಂದುವರೆಸಿದರು. ಅಲ್ಲಿ ಅವರು 1957ರಲ್ಲಿ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು.

ಶಿಕ್ಷಣ

1971ರಲ್ಲಿ ಡಾ. ಮನಮೋಹನ್ ಸಿಂಗ್[Former Prime Minister Manmohan Singh]ಅವರು ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ಭಾರತ ಸರ್ಕಾರದ ಭಾಗವಾದರು. 1972ರಲ್ಲಿ ಇವರನ್ನು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಯಿತು. ಡಾ. ಸಿಂಗ್ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿ, ಪ್ರಧಾನಮಂತ್ರಿಗಳ ಸಲಹೆಗಾರರಾಗಿ, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರಾಗಿ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಉನ್ನತ ಸ್ಥಾನವನ್ನು ಅವರು ಅಲಂಕರಿಸಿದ್ದರು. ಅಂತಿಮವಾಗಿ ಅವರು 2004 ರಿಂದ 2014ರವರೆಗೆ ಭಾರತದ 14ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಆರ್ಥಿಕ ಸುಧಾರಣೆ

1991ರಿಂದ 1996ರವರೆಗೆ ಡಾ. ಸಿಂಗ್ ಅವರು ಭಾರತದ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಆಗ ಮಾಡಿದ ಆರ್ಥಿಕ ಸುಧಾರಣೆಗಳಿಗೆ ಈಗಲೂ ವಿಶ್ವದ ಮನ್ನಣೆ ಇದೆ. ಜನಪ್ರಿಯದೃಷ್ಟಿಕೋನದಿಂದ ನೋಡುವುದಾದರೆ ಭಾರತದ ಅಂದಿನ ದಿನಗಳು ಡಾ. ಸಿಂಗ್ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತವೆ.ಡಾ. ಸಿಂಗ್ ಅವರು ಸಾಮಾಜಿಕ ಕ್ಷೇತ್ರದ ತಮ್ಮ ಅದ್ವಿತೀಯ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಗಳು

ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ (1987) ಸೇರಿದೆ. ಜೊತೆಗೆ ವಿಜ್ಞಾನ ಕಾಂಗ್ರೆಸ್ ನ ಜವಾಹರಲಾಲ್ ನೆಹರೂ ಜನ್ಮ ಶತಮಾನೋತ್ಸವ ಪ್ರಶಸ್ತಿ (1995), ಹಣಕಾಸು ಸಚಿವರಿಗೆ ನೀಡುವ ಏಷ್ಯಾ ವಿತ್ತ ಪ್ರಶಸ್ತಿ (1993 ಮತ್ತು 1994) ಹಣಕಾಸು ಸಚಿವರಿಗೆ ನೀಡುವ ಯೂರೋ ಹಣ ಪ್ರಶಸ್ತಿ (1993), ಕೇಂಬ್ರಿಜ್ ವಿಶ್ವವಿದ್ಯಾಲಯದ ಆಡಮ್ ಸ್ಮಿತ್ ಬಹುಮಾನ (1956), ಕೇಂಬ್ರಿಜ್ ನ ಸೇಂಟ್ ಜಾನ್ ಕಾಲೇಜಿನಲ್ಲಿ ಅತ್ಯತ್ತುಮ ಸಾಧನೆಗಾಗಿ ರೈಟ್ಸ್ ಪ್ರಶಸ್ತಿ (1955) ಲಭಿಸಿದೆ.

Join WhatsApp

Join Now

Leave a Comment