Breaking News:PMAY 2.0 Yojana 2024-25: ನಿಮ್ಮ ಸ್ವಂತ ಮನೆ ಕನಸು ನನಸಾಗಿಸಲು ₹2.50 ಲಕ್ಷ ಸಬ್ಸಿಡಿ!

PMAY 2.0 Yojana

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಯೋಜನೆ 2029ರವರೆಗೆ ವಿಸ್ತರಿಸಲಾಗಿದೆ, ಮತ್ತು ಕೇಂದ್ರ ಸರಕಾರವು ಕಡತಕ್ಕೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಕಡಿಮೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸ್ವಂತ ಮನೆಗಳನ್ನು ನಿರ್ಮಿಸಲು ₹2.5 ಲಕ್ಷ ಸಬ್ಸಿಡಿ ನೀಡುವ ಯೋಜನೆ ರೂಪಿಸಿದೆ. ನೀವು ಸ್ವಂತ ಮನೆ ಹೊಂದಲು ಕನಸು ಕಾಣುತ್ತಿದ್ದರೆ, PMAY 2.0 ಯೋಜನೆಯಡಿ ಅರ್ಜಿ ಸಲ್ಲಿಸಿ ನಿಮ್ಮ ಕನಸು ನನಸಾಗಿಸಿಕೊಳ್ಳಿ.

PMAY 2.0 ಯೋಚನೆಯ ಸಾರಾಂಶ:

“ಹೌಸಿಂಗ್ ಫಾರ್ ಆಲ್” (Housing for All) ಅಭಿಯಾನದಡಿ PMAY 2.0 ಯೋಜನೆ ಪರಿಚಯಿಸಲಾಗಿದೆ. ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ವರ್ಗ (EWS), ಕಡಿಮೆ ಆದಾಯದ (LIG), ಮತ್ತು ಮಧ್ಯಮ ವರ್ಗ (MIG) ಗಳಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲದ ಸಬ್ಸಿಡಿ ನೀಡುತ್ತದೆ.

PMAY 2.0 ಯೋಚನೆಯ ಪ್ರಮುಖ ವೈಶಿಷ್ಟ್ಯಗಳು:

ಆರ್ಥಿಕ ಸಹಾಯ: ₹2.50 ಲಕ್ಷದ ಸಬ್ಸಿಡಿ ಗೃಹ ಸಾಲಗಳಿಗೆ ದೊರಕಲಿದೆ.
ಯೋಜನೆಯ ವಿಸ್ತರಣೆ: 2029ರವರೆಗೆ ಈ ಯೋಜನೆ ವಿಸ್ತರಿಸಲಾಗಿದೆ.
ಲಕ್ಷ್ಯವಾದ ಫಲಾನುಭವಿ: ಈ ಯೋಜನೆಯು 1 ಕೋಟಿ ಜನರಿಗೆ ಸ್ವಂತ ಮನೆ ಹೊಂದಲು ಸಹಾಯ ಮಾಡಲಿದೆ.

PMAY 2.0 ಯೋಜನೆಯಲ್ಲಿ ಯಾರಿಗೆ ಅರ್ಜಿ ಸಲ್ಲಿಸಲು ಅವಕಾಶ?

PMAY 2.0 ಯೋಜನೆಗೆ ಅರ್ಜಿ ಸಲ್ಲಿಸಲು, ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

ಆರ್ಥಿಕ ಅರ್ಹತೆ: ಅರ್ಜಿ ಸಲ್ಲಿಸುವವರು ಆರ್ಥಿಕವಾಗಿ ಹಿಂದುಳಿದ ವರ್ಗ (EWS) ಅಥವಾ ಕಡಿಮೆ ಆದಾಯ ವರ್ಗ (LIG) ಸೇರಿರಬೇಕು.

ಅರ್ಜಿ ಸಲ್ಲಿಸುವವರು ಕಳೆದ 20 ವರ್ಷಗಳಲ್ಲಿ ಯಾವುದೇ ಗೃಹ ಸಹಾಯಧನ ಯೋಜನೆಯಡಿ ಸಬ್ಸಿಡಿ ಪಡೆದಿರಬಾರದು.

ಈಗಾಗಲೇ ಸ್ವಂತ ಮನೆ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹವಿಲ್ಲ.

ಪ್ರಥಮ ಆದ್ಯತೆ: ಮಹಿಳೆಯರು, ಹಿರಿಯ ನಾಗರಿಕರು, ದಿವ್ಯಾಂಗರು ಮತ್ತು ಏಕಾಂಗಿಯಾಗಿ ವಾಸಿಸುವವರು PMAY 2.0 ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಪ್ರಥಮ ಆದ್ಯತೆಯನ್ನು ಪಡೆಯುತ್ತಾರೆ.

PMAY 2.0 ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಆಧಾರ್ ಕಾರ್ಡ್: ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ.
ಬ್ಯಾಂಕ್ ಪಾಸ್ ಬುಕ್: ಬ್ಯಾಂಕ್ ಪಾಸ್ ಬುಕ್ ಪ್ರತಿ
ಜಾತಿ ಮತ್ತು ಆದಾಯ ಪ್ರಮಾಣಪತ್ರ: ಜಾತಿ ಮತ್ತು ಆದಾಯ ಪ್ರಮಾಣಪತ್ರ.
ಫೋಟೋ: ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ.
ಮೊಬೈಲ್ ನಂಬರ್: valid ಮೊಬೈಲ್ ನಂಬರ್.

PMAY 2.0 ಅರ್ಜಿ ಸಲ್ಲಿಸುವ ವಿಧಾನ:

PMAY 2.0 ಯೋಜನೆಯಲ್ಲಿ ಅರ್ಜಿ ಸಲ್ಲಿಸಲು, ಇಬ್ಬರ ವಿಧಾನಗಳನ್ನು ಅನುಸರಿಸಬಹುದು:

ಆನ್ಲೈನ್ ಅರ್ಜಿ ಸಲ್ಲಿಕೆ: ಅಧಿಕೃತ PMAY 2.0 ವೆಬ್‌ಸೈಟ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು.

ಆಫ್‌ಲೈನ್ ಅರ್ಜಿ ಸಲ್ಲಿಕೆ: ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಗ್ರಾಮ ಪಂಚಾಯತ್ ಕಚೇರಿ ಮೂಲಕ ಅರ್ಜಿ ಸಲ್ಲಿಸಬಹುದು.

PMAY 2.0 ಆನ್ಲೈನ್ ಅರ್ಜಿ ಸಲ್ಲಿಸುವ ಹಂತಗಳು:

ಹಂತ 1: ಅಧಿಕೃತ PMAY 2.0 ವೆಬ್‌ಸೈಟ್‌ಗೆ ಹೋಗಿ.

ಹಂತ 2: “Apply for PMAY 2.0” ಬಟನ್ ಮೇಲೆ ಕ್ಲಿಕ್ ಮಾಡಿ, ನಂತರ “Click to Proceed” ಆಯ್ಕೆ ಮಾಡಿ.

ಹಂತ 3: ನಿಮ್ಮ ರಾಜ್ಯ ಮತ್ತು ವಾರ್ಷಿಕ ಆದಾಯ ನಮೂದಿಸಿ, “Eligibility Check” ಮೇಲೆ ಕ್ಲಿಕ್ ಮಾಡಿ.

ಹಂತ 4: ಆಧಾರ್ ಕಾರ್ಡ್ ನಂಬರ ಮತ್ತು ಹೆಸರು ನಮೂದಿಸಿ, OTP ಸೃಷ್ಟಿಸಿ, ಅದನ್ನು ನಮೂದಿಸಿ ಹಾಗೂ ಅಗತ್ಯ ವಿವರಗಳನ್ನು ಭರ್ತಿ ಮಾಡಿ, “Submit” ಬಟನ್ ಕ್ಲಿಕ್ ಮಾಡಿ.

PMAY 2.0 ಅಧಿಕೃತ ವೆಬ್‌ಸೈಟ್: ಇಲ್ಲಿ ಕ್ಲಿಕ್ ಮಾಡಿ

PMAY 2.0 ಯೋಜನೆ ನಿಮಗೆ ಕನಸು ಕಂಡ ಮನೆ ಹೊಂದಲು ಉತ್ತಮ ಅವಕಾಶವನ್ನು ನೀಡುತ್ತದೆ. ನೀವು ಅರ್ಹತೆಗಳನ್ನು ಪೂರೈಸಿದರೆ, ಇದೀಗ ಅರ್ಜಿ ಸಲ್ಲಿಸಿ.

Join WhatsApp

Join Now

Leave a Comment