CIMSRC : ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಗತ್ಯ ಇರುವ ಅಸಿಸ್ಟಂಟ್ ಪ್ರೊಫೆಸರ್ ಹಾಗೂ ಟ್ಯೂಟರ್, ಸೀನಿಯರ್ ರೆಸಿಡೆಂಟ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದ್ದು, ನೇರ ಸಂದರ್ಶನಕ್ಕೆ ಅರ್ಹರನ್ನು ಆಹ್ವಾನಿಸಲಾಗಿದೆ. ಮಾರ್ಚ್ 26 ರಂದು ನೇರ ಸಂದರ್ಶನ ಇದ್ದು, ಮಾಸಿಕ ರೂ.81000 ವರೆಗೆ ವೇತನ ಇದೆ. ಆಸಕ್ತರು ಸವಿವರ ಮಾಹಿತಿ ತಿಳಿದು, ಅರ್ಜಿ ಸಲ್ಲಿಸಿ.
CIMSRC : ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಚಾಮರಾಜನಗರ ಇಲ್ಲಿಗೆ ಖಾಲಿ ಉಳಿದಿರುವ ಸಹಾಯಕ ಪ್ರಾಧ್ಯಾಪಕ/ ಟ್ಯೂಟರ್ ಹುದ್ದೆಗಳಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತದೆ. ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನೇಮಕಾತಿ ಸಂಸ್ಥೆ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, (CIMSRC) ಚಾಮರಾಜನಗರ.
ಹುದ್ದೆಗಳ ಹೆಸರು: ಸಹಾಯಕ ಪ್ರಾಧ್ಯಾಪಕ- 40, ಟ್ಯೂಟರ್ – 24.
ಸಂದರ್ಶನದ ದಿನಾಂಕ : 26-03-2025
ಸಂದರ್ಶನ ಸಮಯ: ಬೆಳಗ್ಗೆ 9.00 ಗಂಟೆಯಿಂದ.
ಸಂದರ್ಶನ ವಿಳಾಸ: ನಿರ್ದೇಶಕರ ಕಚೇರಿ, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಚಾಮರಾಜನಗರ.
ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ವಿವರ
- ಅನಾಟೊಮಿ – 1
- ಫಿಸಿಯೋಲಜಿ -1
- ಬಯೋಕೆಮಿಸ್ಟ್ರಿ – 1
- ಪೆಥಾಲಜಿ – 4
- ಫಾರ್ಮಾಕೋಲಜಿ – 3
- ಮೈಕ್ರೋಬಯೋಲಜಿ – 1
- ಫಾರೆನ್ಸಿಕ್ ಮೆಡಿಷನ್ – 1
- ಕಂಮ್ಯುನಿಟಿ ಮೆಡಿಷನ್ – 3
- ಜೆನೆರಲ್ ಮೆಡಿಷನ್ – 5
- ಡರ್ಮಟೊಲಜಿ – 1
- ರೇಡಿಯೋಲಜಿ – 1
- ರೆಸ್ಪಿಯಾರೇಟರಿ ಮೆಡಿಷನ್ – 1
- ಸೈಕಿಯಾಟ್ರಿ – 1
- ಜೆನೆರಲ್ ಸರ್ಜರಿ – 4
- ಆರ್ಥೋಪೆಡಿಕ್ಸ್ – 1
- ಇಎನ್‌ಟಿ – 2
- ಆರ್ಪಲ್ಮೋಲಜಿ – 1
- ಅನಸ್ತೇಶಿಯಾಲಜಿ – 4
- ಒಬಿಜಿ – 2
- ಪೀಡಿಯಾಟ್ರಿಕ್ಸ್ – 1
- ಡೆಂನ್ಸಿಟಿ ( Oral Facial Maxilo Surgery) – 1
ಟ್ಯೂಟರ್ / ಸೀನಿಯರ್ ರೆಸಿಡೆಂಟ್ / ಸ್ಟ್ಯಾಟಿಸ್ಟಿಷಿಯನ್ ಹುದ್ದೆಗಳ ವಿವರ
- ಅನಾಟಮಿ – 5
- ಫಿಸಿಯೋಲಜಿ – 3
- ಬಯೋಕೆಮಿಸ್ಟ್ರಿ – 3
- ಫಾರ್ಮಾಕೋಲಜಿ – 4
- ಮೈಕ್ರೋಬಯೋಲಜಿ – 4
- ಫಾರೆನ್ಸಿಕ್ ಮೆಡಿಷನ್- 3
- ಕಂಮ್ಯೂನಿಟಿ ಮೆಡಿಷನ್ (Statistician) – 1
ಹುದ್ದೆವಾರು ಅರ್ಹತೆಗಳ ವಿವರ
ಅಸಿಸ್ಟಂಟ್ ಪ್ರೊಫೆಸರ್ : ಎಂಡಿ / ಎಂಎಸ್ / ಡಿಎನ್‌ಬಿ ಅನ್ನು ಹುದ್ದೆಗಳ ವಿಷಯದಲ್ಲಿ ಪಾಸ್ ಮಾಡಿದ್ದು, ಒಂದು ವರ್ಷ ಸೀನಿಯರ್ ರೆಸಿಡೆಂಟ್ ಆಗಿ ಯಾವುದೇ ಮೆಡಿಕಲ್ ಕಾಲೇಜಿನಲ್ಲಿ ಪಾಸ್ ಮಾಡಿರಬೇಕು.
ಟ್ಯೂಟರ್: ಎಂಬಿಬಿಎಸ್ ಪಾಸ್ ಮಾಡಿರಬೇಕು. ಅಥವಾ ಎಂಎಸ್ಸಿ ಅನ್ನು ವೈದ್ಯಕೀಯ ಶಿಕ್ಷಣದಲ್ಲಿ ಪಡೆದಿರಬೇಕು.
ಹುದ್ದೆವಾರು ವೇತನ ಶ್ರೇಣಿ ವಿವರ
ಸಹಾಯಕ ಪ್ರಾಧ್ಯಾಪಕರು: Rs.81,250.
ಟ್ಯೂಟರ್: Rs.50,000.
ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಗರಿಷ್ಠ 38 ವರ್ಷ ವಯಸ್ಸು ನಿಗದಿ ಮಾಡಲಾಗಿದೆ.
ಒಬಿಸಿ ಅಭ್ಯರ್ಥಿಗಳಿಗೆ 41 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 43 ವರ್ಷದವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ.
ಈ ಮೇಲಿನ ಸಹಾಯಕ ಪ್ರಾಧ್ಯಾಪಕ/ ಟ್ಯೂಟರ್ ಹುದ್ದೆಗಳಿಗೆ ಬಯಸುವ ಅಭ್ಯರ್ಥಿಗಳಿಗೆ ಸಂದರ್ಶನದ ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನಶ್ರೇಣಿ, ಮೀಸಲಾತಿ, ಅನುಭವ ಹಾಗೂ ಆಯ್ಕೆ ಪ್ರಕ್ರಿಯೆಯ ವಿವರಗಳಿಗೆ ಸಂಸ್ಥೆಯ https://cimscrnagara.karnataka.gov.in ವೆಬ್ ಸೈಟ್‌ನ್ನು ವೀಕ್ಷಿಸಲು ಕೋರಲಾಗಿದೆ.