Puneeth Rajkumar : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ರಾಜ್ಯಾದ್ಯಂತ ನಡೆಯುತ್ತಿದೆ. ಅಭಿಮಾನಿಗಳು ಉಚಿತ ಪಾನಿಪುರಿ, ಮಸಾಲ ಪುರಿ ನೀಡಲು ಸಜ್ಜಾಗಿದ್ದಾರೆ. CDP ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ (Puneeth Rajkumar) ಸಂಭ್ರಮಾಚರಣೆ ಈಗಾಗಲೇ ರಾಜ್ಯದೆಲ್ಲೆಡೆ ಶುರುವಾಗಿದೆ. ಈ ಹಿನ್ನೆಲೆ ಈ ವಿಶೇಷ ಸಂದರ್ಭವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಲು ಸಜ್ಜಾಗಿದ್ದಾರೆ. ‘ಕರ್ನಾಟಕ ರತ್ನ’ ಪುನೀತ್ ಅವರನ್ನು ಸ್ಮರಿಸಲು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಪ್ಪು ನಮ್ಮನ್ನಗಲಿ ನಾಲ್ಕು ವರ್ಷವೇ ಆಯ್ತು. ಆದರೆ ಅಪ್ಪು ಮಾತ್ರ ಅಜರಾಮರ. ಪುನೀತ್ ರಾಜ್‌ಕುಮಾರ್ 50ನೇ ವರ್ಷ ಹುಟ್ಟುಹಬ್ಬವನ್ನ ಆಚರಿಸಲು ಅಭಿಮಾನಿಗಳು ಸಹ ಹಲವು ರೀತಿಯಲ್ಲಿ ತಯಾರಿ ಆರಂಭಿಸಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಪವರ್ ಸ್ಟಾರ್ ಹುಟ್ಟುಹಬ್ಬದ ದಿನ ಉಚಿತ ಪಾನಿಪುರಿ (Free Panipuri) ನೀಡುವುದಾಗಿ ಹೇಳಿಕೊಂಡಿದ್ದಾರೆ.
ನಗುವಿನ ಒಡೆಯನಿಗೆ 50 ವರ್ಷ!

ಹೌದು, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ನಾಲ್ಕು ವರ್ಷವಾದ್ರೂ ನೆನಪು ಮಾತ್ರ ಹಾಗೇ ಇದೆ. ಸದಾ ನಗುತ್ತಲೇ ಇರುತ್ತಿದ್ದ ಅಪ್ಪು ನಾಳೆ 50 ವರ್ಷ ಪೂರೈಸಲಿದ್ದಾರೆ. ಇನ್ನು ಪ್ರತಿವರ್ಷ ಅಪ್ಪು ಹುಟ್ಟುಹಬ್ಬ ಬಂದಾಗಲೂ ಅಭಿಮಾನಿಗಳು ರಕ್ತದಾನ, ಅನ್ನದಾನ ಹೀಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಇದೀಗ ಇದೇ ರೀತಿಯಲ್ಲಿ ಅಭಿಮಾನಿಯೊಬ್ಬರು ಉಚಿತ ಮಸಾಲ ಪುರಿ ಮತ್ತು ಪಾನಿಪುರಿ ನೀಡಲು ಮುಂದಾಗಿದ್ದಾರೆ.

ಮಸಾಲಪುರಿ, ಪಾನಿಪುರಿ ಫ್ರೀ
ಅಪ್ಪು ಹುಟ್ಟುಹಬ್ಬ ಹಿನ್ನೆಲೆ ಬೆಂಗಳೂರಿನ ಅಭಿಮಾನಿಯೊಬ್ಬರು ಮಸಾಲ ಪುರಿ ಹಾಗೂ ಪಾನಿ ಪುರಿಯನ್ನು ಉಚಿತವಾಗಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ರಾಜಾಜಿನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅನಿಲ್ ಚಾಟ್ಸ್ ಸೆಂಟರ್ ಅವರು ಮಾರ್ಚ್ 17ರಂದು ಸಂಜೆ 5 ಗಂಟೆಯ ನಂತರ ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಉಚಿತವಾಗಿ ಮಸಾಲ ಪುರಿ ಹಾಗೂ ಪಾನಿ ಪುರಿ ನೀಡುವುದಾಗಿ ಅಂಗಡಿ ಮುಂದೆಯೇ ಬ್ಯಾನರ್ ಅಳವಡಿಸಿದ್ದಾರೆ.
Puneeth Rajkumar ಬ್ಯಾನರ್‌ನಲ್ಲಿ ಏನಿದೆ?
‘ನಗುಮೊಗದ ಶ್ರೀಮಂತ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬ ಪ್ರಯುಕ್ತವಾಗಿ ಹಾಗೂ ಟೀಮ್ ಇಂಡಿಯಾ 2025ರ ಐಸಿಸಿ ಚಾಂಪಿಯನ್ ಟ್ರೋಫಿ ಗೆದ್ದಿದ್ದಕ್ಕಾಗಿ ಉಚಿತವಾಗಿ ಪಾನಿ ಪೂರಿ ಹಾಗೂ ಮಸಾಲ ಪುರಿಯನ್ನು ನೀಡಲಾಗುತ್ತೆ’ ಎಂದು ಬ್ಯಾನರ್ ಅಳವಡಿಸಿದ್ದಾರೆ. ಸದ್ಯ ಈ ಬ್ಯಾನರ್ ಎಲ್ಲರ ಗಮನಸೆಳೆದಿದೆ. ಸದ್ಯ ಈ ಬ್ಯಾನರ್ ಸೋಷಿಯಲ್ ಮೀಡಿಯಾದಲ್ಲೂ ಭಾರೀ ವೈರಲ್ ಆಗುತ್ತಿದೆ.
ಅಪ್ಪು ಜನ್ಮ ದಿನದ ಒಂದು ದಿನದ ಮುಂಚೇನೆ ಸಿಡಿಪಿ ರಿಲೀಸ್! ಫ್ಯಾನ್ಸ್ ಕಲ್ಪನೆ ನಿಜಕ್ಕೂ ಸೂಪರ್

ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಜನ್ಮ ದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು (Fans) ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. ಇದು ಸ್ಪೆಷಲ್ ಆಗಿದೆ. ಪುನೀತ್ ರಾಜ್‌ಕುಮಾರ್ ತಮ್ಮನ್ನ ತಾವು ಹೇಗೆ ರೂಪಿಸಿಕೊಂಡರು ಅನ್ನುವ ಕಲ್ಪನೆ ಇಲ್ಲಿ ವಿಶೇಷವಾಗಿಯೇ ಇದೆ. ಶಿಲ್ಪಿಯೊಬ್ಬ ಶಿಲ್ಪವನ್ನ ಕೆತ್ತಿದ ರೂಪದಲ್ಲಿಯೇ ಈ CDP ಇದೆ. ಪುನೀತ್ ಸಿನಿಮಾ (Puneeth Cinema) ಜರ್ನಿಯ ಚಿತ್ರಗಳ ಪ್ರಮುಖ ಪಾತ್ರಗಳ ಝಲಕ್ ಕೂಡ ಈ CDP ಯಲ್ಲಿವೆ. ಈ ಒಂದು ವಿಶೇಷ CDP ಯನ್ನ ಪುನೀತ್ ಅಭಿಮಾನಿಗಳೇ ರಿಲೀಸ್ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಪ್ಪು 50 ನೇ ಜನ್ಮ ದಿನಕ್ಕೆ CDP ರಿಲೀಸ್
ಪುನೀತ್ ರಾಜ್‌ಕುಮಾರ್ 50 ನೇ ಜನ್ಮ ದಿನದ ಸಂಭ್ರಮ ಶುರು ಆಗಿದೆ. ಕಳೆದ ಒಂದು ತಿಂಗಳಿನಿಂದಲೂ ಈ ದಿನಕ್ಕಾಗಿಯೇ ಫ್ಯಾನ್ಸ್ ಕಾಯುತ್ತಿದ್ದಾರೆ. ಇದರ ಮಧ್ಯೆ CDPಯನ್ನು ಇದೀಗ ಫ್ಯಾನ್ಸ್ ರಿಲೀಸ್ ಮಾಡಿದ್ದಾರೆ. ಈ ಒಂದು CDP ತುಂಬಾನೆ ಸ್ಪೆಷಲ್ ಆಗಿದೆ. ಅದೆಷ್ಟು ಅಂದ್ರೆ ಪುನೀತ್ ಪಾತ್ರಗಳು ಈ ಒಂದು CDP ಯಲ್ಲಿವೆ.
ಅಭಿಮಾನಿಗಳು ಈ ರೀತಿ ಬರೆದು CDP ರಿಲೀಸ್

ಈ ಮೂಲಕ ಪುನೀತ್ ಅಭಿಮಾನಿಗಳು ಈ ವಿಷಯವನ್ನ ತುಂಬಾನೆ ಚೆನ್ನಾಗಿಯೇ ಹೇಳಿದ್ದಾರೆ. ಅವರು ಬರೆದಿರೋದು ಅಷ್ಟೇ ಇಂಟ್ರಸ್ಟಿಂಗ್ ಆಗಿದೆ. ಅದು ಈ ರೀತಿ ಇದೆ ಓದಿ.
“ತನ್ನ ಅಂತರಾತ್ಮವನ್ನು ಹೊಳೆಸಲು, ತನ್ನನ್ನು ತಾನೇ ಶಿಲ್ಪವಾಗಿಸಿದಾಗ ಮಾತ್ರ, ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಬಹುದು, ಶ್ರದ್ಧೆ ಮತ್ತು ಮಾನವೀಯತೆಯ ಕೆತ್ತನೆಯಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ, ನಿಮಗೆ 50 ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು
50 ನೇ ಜನ್ಮದಿನದ ಸ್ಮರಣಾರ್ಥ, ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರುವ “ಡಾ|| ಪುನೀತ್ ರಾಜ್‌ಕುಮಾರ್” ಅವರಿಗೆ ಗೌರವ ಸಲ್ಲಿಸುವ ಮೂಲಕ ಅಧಿಕೃತ ಸಾಮಾನ್ಯ ಪ್ರದರ್ಶನ ಚಿತ್ರ (CDP) ನಿಮ್ಮ ಮುಂದೆ!!
Disclaimer : This information regarding the free panipuri distribution in honor of Puneeth Rajkumar’s birthday is based on currently available reports. Event details, including location, time, and availability, are subject to change. Please verify information at the location or with event organisers if possible.
This information is provided for informational purposes only and does not constitute an official announcement. We do not endorse or take responsibility for the event’s execution or any issues that may arise. Please exercise caution and follow local guidelines when attending public events.